Jio, Airtel ಮತ್ತು Vodafone-Idea ಬೆಸ್ಟ್ ರೀಚಾರ್ಜ್ ಪ್ಲಾನ್ ಯಾವುದು ತಿಳಿಯಿರಿ

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ  ಕಂಪನಿಗಳು ಭಾರೀ ಆಫರ್ ಗಳನ್ನು ನೀಡುತ್ತಿವೆ. ಏರ್‌ಟೆಲ್‌ 398 ರೂ., 448 ಮತ್ತು 558 ರೂಗಳ ರೀಚಾರ್ಜ್ ಪ್ಲಾನ್ ನೀಡುತ್ತಿದೆ.  ಆಫರ್ ನೀಡುವುದರಲ್ಲಿ ವೊಡಾಫೋನ್-ಐಡಿಯಾ ಕೂಡಾ ಹಿಂದೆ ಬಿದ್ದಿಲ್ಲ..

Written by - Ranjitha R K | Last Updated : Apr 11, 2021, 12:32 PM IST
  • ಏರ್‌ಟೆಲ್‌ನ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್
  • ಜಿಯೋ ಕೂಡಾ ನೀಡುತ್ತಿದೆ ಅತ್ಯುತ್ತಮ ಪ್ಲಾನ್
  • ಆಫರ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ ವೊಡಾಫೋನ್-ಐಡಿಯಾ
Jio, Airtel ಮತ್ತು Vodafone-Idea ಬೆಸ್ಟ್ ರೀಚಾರ್ಜ್ ಪ್ಲಾನ್ ಯಾವುದು ತಿಳಿಯಿರಿ title=
ಟೆಲಿಕಾಂ ಕಂಪನಿಗಳ ಬೆಸ್ಟ್ ರೀಚಾರ್ಜ್ ಪ್ಲಾನ್ (file photo)

ನವದೆಹಲಿ: ಕರೋನಾ ಸಾಂಕ್ರಾಮಿಕ (Coronavirus) ಕಾಲದಲ್ಲಿ ಇಂಟರ್‌ ನೆಟ್  ಬೇಡಿಕೆಗಳು ಹೆಚ್ಚಿವೆ. ಮನೆ,ಕಚೇರಿ ಶಾಲೆ ಎಲ್ಲಾ ಕಡೆಗಳಲ್ಲಿ ಇಂಟರ್ ನೆಟ್ (Internet) ಬೇಡಿಕೆಗಳು ಹೆಚ್ಚಾಗಿವೆ.  ಎಲ್ಲಾ ಟೆಲಿಕಾಂ ಕಂಪನಿಗಳು ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಕೂಡಾ ಭಾರೀ ಆಫರ್ ಗಳನ್ನು ನೀಡುತ್ತಿವೆ.  

ಏರ್‌ಟೆಲ್‌ನ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳು : 
ಪ್ರಸ್ತುತ ಏರ್‌ಟೆಲ್‌ (Airtel) 398 ರೂ., 448 ಮತ್ತು 558 ರೂಗಳ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಈ ಎಲ್ಲಾ ಪ್ಲಾನ್ ಗಳಲ್ಲಿ ಬಳಕೆದಾರರಿಗೆ ಪ್ರತಿದಿನ 3 ಜಿಬಿ ಡೇಟಾದೊಂದಿಗೆ  100 ಎಸ್‌ಎಂಎಸ್ (SMS) ಮತ್ತು ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಒಂದು ತಿಂಗಳವರೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಉಚಿತ ಚಂದಾದಾರಿಕೆ ಸಿಗಲಿದೆ. ಏರ್‌ಟೆಲ್‌ನ 448 ರೂ ಯೋಜನೆಯಲ್ಲಿ, ಬಳಕೆದಾರರು ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ (Disney +Hotstar) ವಿಐಪಿಯ ಉಚಿತ ಚಂದಾದಾರಿಕೆ ಪಡೆಯುತ್ತಾರೆ. 398 ಮತ್ತು 448 ರೂಗಳ ಪ್ಲಾನ್ ಸಿಂಧುತ್ವವು 28 ದಿನಗಳವರೆಗೆ ಇರಲಿದೆ ಮತ್ತು 558 ರೂಪಾಯಿಗಳ ಪ್ಲಾನ್ (Recharge Plan)ನಲ್ಲಿ 56 ದಿನಗಳವರೆಗೆ ವ್ಯಾಲಿಡಿಟಿ ಇರಲಿದೆ.  

ಇದನ್ನೂ ಓದಿ : ಈ Prepaid planಗಳಲ್ಲಿ ಸಿಗಲಿದೆ ಪ್ರತಿದಿನ 3 GB Data

ಜಿಯೋ ರಿಚಾರ್ಜ್ ಪ್ಲಾನ್ ಗಳು ಇವು : 
ರಿಲಯನ್ಸ್ ಜಿಯೋ (Jio) ಬಳಕೆದಾರರಿಗೆ 349, 401 ಮತ್ತು 999 ರೂಪಾಯಿಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳನ್ನು ನೀದಿದೆ. ಈ ಯೋಜನೆಗಳಲ್ಲಿ, ಬಳಕೆದಾರರು ಪ್ರತಿದಿನ 3 ಜಿಬಿ ಡೇಟಾ ಜೊತೆಗೆ ಅನಿಯಮಿತ  ವಾಯ್ಸ್ ಕಾಲ್  ಪ್ರತಿದಿನ 100 ಎಸ್‌ಎಂಎಸ್ ಗಳ ಸೌಲಭ್ಯ ಪಡೆಯುತ್ತಾರೆ.  ಅಲ್ಲದೆ ಜಿಯೋ ಅಪ್ಲಿಕೇಶನ್‌ಗಳ (Jio Application) ಉಚಿತ ಚಂದಾದಾರಿಕೆ ಕೂಡಾ ಸಿಗಲಿದೆ. ಜಿಯೋನ 401 ರೂಪಾಯಿ ಯೋಜನೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ ಒಂದು ವರ್ಷದ ಚಂದಾದಾರಿಕೆಯನ್ನುಪಡೆಯಬಹುದು. ಜಿಯೋನ 349 ಮತ್ತು 401 ರೂಪಾಯಿ ಯೋಜನೆಗಳಲ್ಲಿ 28 ದಿನಗಳ ವ್ಯಾಲಿಡಿಟಿ (Validity) ಇರಲಿದೆ. ಅದೇ ರೀತಿ 999 ರೂಗಳ ಯೋಜನೆಯ ಸಿಂಧುತ್ವವು 84 ದಿನಗಳವರೆಗೆ ಇರಲಿದೆ. 

ಆಫರ್ ನೀಡುವುದರಲ್ಲಿ ವೊಡಾಫೋನ್-ಐಡಿಯಾ ಕೂಡಾ ಹಿಂದೆ ಬಿದ್ದಿಲ್ಲ : 
ವೊಡಾಫೋನ್-ಐಡಿಯಾ (Vi) ಕೂಡಾ ತನ್ನ ಬಳಕೆದಾರರಿಗೆ 410, 601 ಮತ್ತು 801 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿದೆ. ಈ ಎಲ್ಲಾ ಪ್ರಿಪೇಯ್ಡ್ ಪ್ಲಾನ್ ಗಳಲ್ಲಿ, ಬಳಕೆದಾರರು ಪ್ರತಿದಿನ 3 ಜಿಬಿ ಡೇಟಾ ಜೊತೆಗೆ ಅನ್ ಲಿಮಿಟೆಡ್ ಕರೆ (Umlimited calls)ಮಾಡುವ ಅವಕಾಶ ಪಡೆಯಲಿದ್ದಾರೆ. ಅಲ್ಲದೆ ಪ್ರತಿದಿನ  100 ಎಸ್‌ಎಂಎಸ್ ಸೌಲಭ್ಯ ಕೂಡಾ ಇರಲಿದೆ.  ಇದರೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ ಉಚಿತ ಚಂದಾದಾರಿಕೆ ಸಿಗಲಿದೆ. ಕಂಪನಿಯ 401 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್ ನಲ್ಲಿ 16 ಜಿಬಿ ಬೋನಸ್ ಡೇಟಾ ಲಭ್ಯವಿರಲಿದೆ. ಇದರ ಸಿಂಧುತ್ವವು 28 ದಿನಗಳು. 601 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯು 32 ಜಿಬಿ ಬೋನಸ್ ಡೇಟಾದೊಂದಿಗೆ 56 ದಿನಗಳ ಸಿಂಧುತ್ವವನ್ನು ಒದಗಿಸುತ್ತದೆ. 801 ರೂಪಾಯಿಗಳ ಯೋಜನೆಯಲ್ಲಿ, ಬಳಕೆದಾರರು 48 ಜಿಬಿ ಬೋನಸ್ ಡೇಟಾದೊಂದಿಗೆ 84 ದಿನಗಳ ವ್ಯಾಲಿಡಿಟಿ ಪಡೆಯುತ್ತಾರೆ.

ಇದನ್ನೂ ಓದಿ : Free Calling ಜೊತೆಗೆ 56GB Data ಈ ಟೆಲಿಕಾಂ ಕಂಪನಿ ನೀಡುತ್ತಿದೆ ಬೆಸ್ಟ್ ಪ್ಲಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News